You are here
Home > Political > ಜೆಡಿಎಸ್-ಬಿಜೆಪಿ ಮೈತ್ರಿಗೆ ಸ್ಫೋಟಕ ತಿರುವು, ಇನ್ನೇನು ದೋಸ್ತಿ ಫೈನಲ್ ಎನ್ನುಷ್ಟರಲ್ಲೇ ಕತ್ರಿ ಬಿತ್ತೇ?

ಜೆಡಿಎಸ್-ಬಿಜೆಪಿ ಮೈತ್ರಿಗೆ ಸ್ಫೋಟಕ ತಿರುವು, ಇನ್ನೇನು ದೋಸ್ತಿ ಫೈನಲ್ ಎನ್ನುಷ್ಟರಲ್ಲೇ ಕತ್ರಿ ಬಿತ್ತೇ?

ಮೈತ್ರಿಗೆ ಅಮಿತ್ ಶಾನೇ ಒಪ್ಪಿಗೆ ಸೂಚಿಸಿದ್ದಾರೆ ಅಂದಿದ್ರು.. ನಿನ್ನೆ ಹಂಗೇನೂ ಇಲ್ಲ ಅಂದಿದ್ರು. ಇಂದು ಅವರು ಕೇಳಿಲ್ಲ, ನಾವು ಹೇಳಿಲ್ಲ ಎಂದಿದ್ದಾರೆ. ಇದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಮೂರು ದಿನದಲ್ಲಿ ಮಾಜಿ ಸಿಎಂ ಬಿಎಸ್​ವೈ ಕೊಟ್ಟ ಮೂರು ಹೇಳಿಕೆ.
ಅಲ್ಲಿಗೆ ದೋಸ್ತಿ ವಿಚಾರಕ್ಕೆ ದೊಡ್ಡ ತಿರುವು ಸಿಕ್ಕಿದೆ.

ಬೆಂಗಳೂರು, (ಸೆಪ್ಟೆಂಬರ್ 15): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ (ಎಆS-ಃಎP ಂಟಟiಚಿಟಿಛಿe) ಆಗೇ ಬಿಡುತ್ತೆ, ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ಇನ್ನೇನಿದ್ರೂ ಸೀಟ್ ಹಂಚಿಕೆ ನಡೀಬೇಕು ಅಷ್ಟೇ ಎನ್ನಲಾಗಿತ್ತು. ಖುದ್ದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಇಂಥಾ ಮಾತು ಹೇಳಿದ್ರಿಂದ ಅದಕ್ಕೆ ಒಂದು ತೂಕವೂ ಬಂದಿತ್ತು. ನಿನ್ನೆ(ಸೆಪ್ಟೆಂಬರ್ 14) ದೆಹಲಿಯಲ್ಲಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸಭೆಯೂ ನಡೆದಿದೆ. ಹೀಗಾಗಿ ಮೈತ್ರಿ ಅಂತಿಮ ಹಂತಕ್ಕೆ ಬರುತ್ತೆ ಎನ್ನಲಾಗಿತ್ತು. ಆದ್ರೆ ಸಭೆಯಲ್ಲಿ ವಿಚಾರವಾಗಿ ಚರ್ಚೆಯಾಗಿಲ್ಲ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಮನಸ್ಸಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಬಿಎಸ್​ವೈ ಹೇಳಿದ್ದಾರೆ.

ಇನ್ನು ಮೊನ್ನೆ, ಜೆಡಿಎಸ್ ಜೊತೆ ಸೇರಿ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದಿದ್ದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಹ ಇಂದು, ಬೇರೆ ರೀತಿ ಮಾತನಾಡಿದ್ದಾರೆ. ಮೈತ್ರಿ ವಿಚಾರ ಪ್ರಾಥಮಿಕ ಹಂತದಲ್ಲಿದೆ, ಬರುವ ದಿನಗಳಲ್ಲಿ ವರಿಷ್ಠರು ಚರ್ಚಿಸುತ್ತಾರೆ ಎಂದು ಹೇಳಿದ್ದಾರೆ.
ಈಗಾಗಲೇ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಅವರು ಮೈತ್ರಿ ಬಗ್ಗೆ ದೂರವಾಣಿ ಮೂಲಕ ಬಿಜೆಪಿ ವರಿಷ್ಠರ ಜತೆ ಚರ್ಚಿಸಿದ್ದಾರೆ. ಇದೀಗ ಖುದ್ದು ಮುಖಾಮುಖಿಯಾಗಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ಒಂದೇ ಬಾಕಿ ಇದೆ ಎನ್ನಲಾಗುತ್ತಿದೆ. ಆದ್ರೆ, ಇದುವರೆಗೂ ಮೋದಿ, ಕುಮಾರಸ್ವಾಮಿ ಭೇಟಿಗೆ ಆಹ್ವಾನ ನೀಡಿಲ್ಲ.

ಮೈತ್ರಿಗೆ ಕತ್ರಿ ಬಿತ್ತೇ?, ಬಿಜೆಪಿ ಕುಟುಕಿದ ಕಾಂಗ್ರೆಸ್ ಪಡೆ!

ಒಂದ್ಕಡೆ ಬಿಎಸ್​ವೈ ಹೀಗೆ ಮೈತ್ರಿ ಕುರಿತು ಯೂಟರ್ನ್ ಹೊಡೆಯೋ ರೀತಿ ಹೇಳಿಕೆ ಕೊಡುತ್ತಿದ್ದರೆ, ಇದನ್ನೇ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿತ್ತು. ಯಡಿಯೂರಪ್ಪ ಜೆಡಿಎಸ್ ಜೊತೆ ಸಖ್ಯ ಬೆಳೆಸುವ ಮಾತನಾಡಿದ್ರು, ಈಗ ಯೂಟರ್ನ್ ಹೊಡೆದಿದ್ದಾರೆ. ಮೈತ್ರಿಯ ಚೌಕಾಸಿ ವ್ಯವಹಾರ ಕುದರಲಿಲ್ವೇ, ಅಥವಾ ಯಡಿಯೂರಪ್ಪನವರನನ್ ಕಟ್ಟಿ ಹಾಕಲು ಈ ಕಡಿವಾಣ ಹಾಕಿದ್ದೇ..? ಎಂದು ಟ್ವೀಟ್​ನಲ್ಲಿ ಪ್ರಶ್ನಿಸಿದೆ. ಇನ್ನು ಸಚಿವ ಚೆಲುವರಾಯಸ್ವಾಮಿ ಸೀಟು ಹಂಚಿಕೆ ಬಗ್ಗೆ ಇನ್ನೂ ಗೊಂದಲವಿದೆ ಹೀಗಾಗಿಯೇ ಯಡಿಯೂರಪ್ಪ ಆ ರೀತಿ ಹೇಳಿದ್ದಾರೆ ಎಂದಿದ್ದಾರೆ.

ದಳ ಕಮಲ ಮೈತ್ರಿ ಇನ್ನೇನು ಫೈನಲ್ ಹಂತಕ್ಕೆ ಹೋಗಿದೆ ಎನ್ನುವಾಗಲೇ, ತಿರುವು ಸಿಕ್ಕಿದೆ. ಆದ್ರೆ ವಿಚಾರ ಅದಲ್ಲ, ಮಾಜಿ ಸಿಎಂ ಯಡಿಯೂರಪ್ಪ, ಅಷ್ಟು ಖಡಾ ಖಂಡಿತವಾಗಿ ಮೈತ್ರಿ ಬಗ್ಗೆ ಹೇಳಿಕೆ ಕೊಟ್ಟು, ಈಗ ಸೈಲೆಂಟ್ ಆಗುತ್ತಿರುವುದು ನಾನಾ ಅನುಮಾನ, ಪ್ರಶ್ನೆಗಳನ್ನ ಹುಟ್ಟಿಸಿದೆ.

Top